ಮರುಳಾಟವೇಕೆ ಮನುಜಾ ।
ಮರುಳಾಟವೇಕೊ?
ಊರ್ಧ್ವ ಪುಂಡ್ರವಿಲ್ಲದ ಮುಖವ ತಿದ್ದಿ ನೋಡಲೇಕೊ 1
ಶುದ್ಧ ಸಾತ್ತ್ವಿಕವಿಲ್ಲದನ ಬುದ್ಧಿ ಏತಕೊ
ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ ।
ಮಧ್ವಶಾಸ್ತ್ರ ಓದದವನ ವಿದ್ಯೆ ಏತಕೊ ಮನುಜಾ
ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ -ಜಪವೇಕೆ 1
ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ |
ತೊತ್ತು ಹೋಗುವವಗೆ ಪರತತ್ತ್ವ ವಿಚಾರವೇಕೋ |
ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ
ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ ।
ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ |
ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ !
ಕುಸುಮನಾಭಗರ್ಪಿಸದ ಅಶನವೇತಕೊ ಮನುಜಾ
ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೆ ||
ಶ್ರೀಲೋಲನ ನೆನೆಯದವನ ಬಾಳುವೆಯೇತಕೊ 1
ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ । ಸಾಲಿಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ
ಕಂಡ ನಾರಿ ಯೀಕ್ಷಿಸುವ ಲಂಡಗೆ ಪುರಾಣವೇತಕೋ ।
ಭಂಡ ಮಾತನಾಡುವನ ಪಾಂಡಿತ್ಯವೇತಕೊ |
ಪುಂಡರೀಕವರದ ಶ್ರೀ ಪುರಂದರವಿಠಲನ ।
ಕಂಡು ಭಜಿಸಲರಿಯದವನ ವಿತಂಡಬುದ್ಧಿಯೇತಕೋ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ