ಕೀರ್ತನೆ - 573     
 
ಮಡಿ ಮಡಿ ಮಡಿಯೆಂದು ಮುಮ್ಮಾರು ಹಾರುತಿ | ಮಡಿಯೆಲ್ಲಿ ಬಂದಿತೊ ಬಿಕನಾಶಿ ಮಡಿಯು ನೀನೆ - ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಶಿ 1 ಎಲವು – ಚರ್ಮ ಮಲ ಮೂತ್ರ ಗುಂಡಿಯಲಿ | ನಲಿಯುತ ನಿಂತೆಯೊ ಬಿಕನಾಶಿ || ನೆಲೆಗೊಂಡ ನವದ್ವಾರದ ಹೊಲೆಯೊಳು | ಅಳಲುತ ನೀ ಬಿದ್ದೆ ಬಿಕನಾಶಿ ಹುಟ್ಟಲು ಸೂತಕ ಸಾಯಲು ಸೂತಕ | ನಟ್ಟುನಡುವೆ ಬಂತೆ ಬಿಕನಾಶಿ | ಬಿಟ್ಟು ಬಿಡದೆ ಕಾವೇರಿಯ ಮುಳುಗಲು | ಮುಟ್ಟು ಹೋಹುದೆ ಬಿಕನಾಶಿ ಚರ್ಮವ ತೊಳೆದರೆ ಕರ್ಮವು ಹೊಹುದೆ ಮರ್ಮವ ತಿಳಿಯದೆ ಬಿಕನಾಶಿ ॥ ಬೊಮ್ಮನಯ್ಯ ಪುರಂದರವಿಠಲನ ಪಾಡಿ | ನಿರ್ಮಲದಿ ಬಾಳೆಲೊ ಬಿಕನಾಶಿ