ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ ।
ಮಡಿ ಮಾಡುವ ಬಗೆ ಬೇರುಂಟು ಪೊಡವಿಪಾಲಕನ ಧ್ಯಾನ ಮಾಡುವುದು |
ಬಿಡದೆ ಭಜಿಸುವುದು ಅದು ಮಡಿಯೊ
ಬಟ್ಟೆಯ ನೀರೊಳಗಿಟ್ಟು ಒಣಗಿಸಿ |
ಉಟ್ಟರೆ ಅದು ತಾ ಮಡಿಯಲ್ಲ ॥
ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |
ಬಿಟ್ಟರೆ ಅದು ತಾ ಮಡಿಯೊ
ಪರಧನ ಪರಸತಿ ಪರನಿಂದೆಗಳನು 1
ಜರೆದಹಂಕಾರಗಳನೆ ತೊರೆದು ||
ಹರಿಹರಿಯೆಂದು ದೃಢದಿ ಮನದಲಿ
ಇರುಳು ಹಗಲು ಸ್ಮರಿಸಲು ಮಡಿಯೊ
ಎಚ್ಚರವಿಲ್ಲದೆ ಮಲ ಮೂತ್ರ ದೇಹವ |
ನೆಚ್ಚಿ ಕೆಡಲು ಬೇಡಲೊ ಮನವೆ ॥
ಅಚ್ಚುತಾನಂತನ ನಾಮವ ಮನಗೊಂಡು
ಸಚ್ಚಿಂತೆಯಲಿರುವುದೆ ಮಡಿಯೊ
ಭೂಸುರರು ಮಧ್ಯಾಹ್ನಕಾಲದಲಿ |
ಹಸಿದು ಬಳಲಿ ಬಂದರೆ ಮನೆಗೆ |
ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು ।
ಹಸನಾಗಿ ಉಂಬುವುದು ಅದು ಮಡಿಯೊ
ದಶಮಿ ದ್ವಾದಶಿಯ ಪುಣ್ಯಕಾಲದಲಿ 1
ವಸುದೇವ ಸುತನ ಪೂಜಿಸದೆ ॥
ದೋಷಕಂಜದೆ ಪರರನ್ನ ಭುಜಿಸಿ ಯಮ
ಪಾಶಕೆ ಬೀಳ್ವುದು ಹುಸಿಮಡಿಯೊ
ಸ್ನಾನ - ಸಂಧ್ಯಾನ ಮೊದಲಾದ ಕರ್ಮಗಳೆಲ್ಲ ।
ಜ್ಞಾನ ಮಾನ ಸುಮ್ಮಾನದಿಂದ ||
ದೀನವಂದ್ಯನ ಸುಜನ ಸಂತರ್ಪಣ |
ಅನುದಿನ ಮಾಡುವುದು ಘನಮಡಿಯೊ
ಗುರು ಹಿರಿಯರ ಹರಿದಾಸರ ನೆನೆದು
ಚರಣಕೆರಗಿ ಭಯ ಭಕ್ತಿಯಿಂದ
ಪರಿಪರಿ ವಿಧದಲಿ ಪುರಂದರವಿಠಲನ ।
ನೆರನೆಂಬುವುದು ಉತ್ತಮ ಮಡಿಯೊ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ