ಕೀರ್ತನೆ - 569     
 
ಬುತ್ತಿಯ ಕಟ್ಟೋ - ಮನುಜಾ ॥ ಬುತ್ತಿಯ ಕಟ್ಟೋ ಬುತ್ತಿಯನ್ನು ಕಟ್ಟಿದರೆ | ಎತ್ತಲಾದರುಣ್ಣಬಹುದು ಧರ್ಮವೆಂಬ ಮಡಿಕೆಯಲ್ಲಿ | ನಿರ್ಮಲ ಗಂಗೆಯನು ತುಂಬಿ ।। ಸುಮ್ಮಾನದಿಂದಲಿ ಬೇಗ 1 ಒಮ್ಮಾನಕ್ಕಿಯ ಅನ್ನಬಾಗಿ ಅರಿವು ಎಂಬ ಅರಿವೆಯ ಹಾಸಿ । ಗರಿಮೆ ಹಾಲ - ಮೊಸರ ತಳಿದು || ಪರಮವೈರಾಗ್ಯದಿಂದ । ಸಿರಿಹರಿಗರ್ಪಿತವೆಂದು ಕರ್ತೃಪುರಂದರವಿಠಲನ | ತತ್ತ್ವವೆಂಬ ಬುತ್ತಿಯನ್ನು || ಹತ್ತಿರ ತಂದಿಟ್ಟುಕೊಂಡು ! ನಿತ್ಯವುಂಡು ತೃಪ್ತಿಪಡೆಯೊ