ಕೀರ್ತನೆ - 568     
 
ಬಾತೆಗೆ ಬಾರದ ವಸ್ತು ಬಹಳಿದ್ದರೇನು ಹೋತಿನ ಕೊರಳೊಳಗೆ ಮೊಲೆಯಿದ್ದರೇನು ? ತಾನು ಉಣ್ಣದ ದ್ರವ್ಯ ತಾಳೆಯುದ್ದ ಇದ್ದರೇನು? ದಾನವಿಲ್ಲದ ಮನೆಯು ದೊಡ್ಡದಾದರೇನು ? ಹೀನ ಕುಲದವಂಗೆ ಹಿರಿತನ ಬಂದರೇನು ಶ್ವಾನನ ಮೊಲೆಯೊಳು ಹಾಲಿದ್ದರೇನು ವಾದಿಸುವ ಮಗನು ಒಯ್ಯಾರದಲಿದ್ದರೇನು ಕಾದುವ ಸತಿ ಕೆಲದೊಳಿದ್ದರೇನು ? ಕ್ರೋಧವನು ಅಳಿಯದ ಸೋದರನು ಇದ್ದರೇನು ಮಾದಿಗರ ಮನೆಯಲಿ ಮದುವೆ ಆದರೇನು ಹೋಗದೂರಿನ ಹಾದಿ ಕೇಳಿ ಮಾಡುವುದೇನು ಮೂಗನ ಕೂಡ ಏಕಾಂತವಿನ್ನೇನು ? ಯೋಗಿ ಶ್ರೀ ಪುರಂದರವಿಠಲನ ನೆನೆಯದವ ಯೋಗಿಯಾದರೆ ಏನು ಜೋಗಿಯಾದರೆ ಏನು ?