ಕೀರ್ತನೆ - 567     
 
ಬಲ್ಲಿದ ನೀನೆಂದು ಬಡವರ ಬಾಯನು ಬಡಿಯದಿರೆಚ್ಚರಿಕೆ ಎಳ್ಳಷ್ಟು ತಪ್ಪಿದರೆ ಯಮನವರೆಳೆದೊಯ್ವರು ಎಚ್ಚರಿಕೆಚ್ಚರಿಕೆ ಮಾಡು ದಾನ - ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ ಕೇಡನೆಣಿಸಬೇಡ ನಂಬಿದ ಠಾವಿಗೆ ಕೆಡುವೆ ಮತ್ತೆಚ್ಚರಿಕೆ ಮೂಢರ ಒಡನಾಡಿ ಮುಂದರಿಯದೆ ನೀನು ಮುನಿಯದಿರೆಚ್ಚರಿಕೆ ನೋಡಿ ನಡೆವ ಸುಗುಣರ ನೋಡಿ ನಡೆಯೊ ನೀ ನಟನೆ ಬೇಡಚ್ಚರಿಕೆ ಹೊನ್ನು - ಹೆಣ್ಣು - ಮಣ್ಣು ತನ್ನನೆ ಅಣಕಿಸಿ ಹೋಹುವು ಎಚ್ಚರಿಕೆ ಮುನ್ನ ಮಾಡಿದ ಫಲದಿಂದಲಿ ಬಂದೆಯೊ ಮುಂದೆ ಇನ್ನೆಚ್ಚರಿಕೆ ಚೆನ್ನಾಗಿ ತಾ ಬಾಳಿ ಬದುಕುವೆನೆಂತೆಂಬ ಚೇಷ್ಟೆ ಬೇಡೆಚ್ಚರಿಕೆ ಬೆನ್ನನು ಬಡಿಯದೆ ಬಿಡುವರೆ ಯಮನವರು ಮರೆಯದಿರೆಚ್ಚರಿಕೆ ಬಾಳಿ ಬದುಕಿ ಸಿರಿವಾಹಗೆ ಟವಳಿಯ ಬಣಗು ಬೇಡದೆಚ್ಚರಿಕೆ ಹಾಳು ಬದುಕಿಗಾಗಿ ಹಲವರ ಕೂಡಣ ಹಗರಣ ಬೇಡಚ್ಚರಿಕೆ ಕಾಲನವರು ಬಂದು ಆವಾಗ ಕರೆವರೊ ಕಾಣದು ಎಚ್ಚರಿಕೆ ಶ್ರೀಲೋಲ ಪುರಂದರವಿಠಲರಾಯನ ಮರೆಯದಿರೆಚ್ಚರಿಕೆ