ಕೀರ್ತನೆ - 565     
 
ಬಡವಾ ನಿನಗೊಬ್ಬರ ಗೊಡವೆ ಏತಕೊ । ಒಡವೆ ವಸ್ತು ತಾಯಿತಂದೆ ಒಡೆಯ ಕೃಷ್ಣನೆಂದು ನಂಬೋ ಒಪ್ಪತ್ತು ಭಿಕ್ಷವ ಬೇಡು, ಒಬ್ಬರಿಗೆ ಒಂದಿಷ್ಟು ನೀಡು | ಅಪ್ಪನಾದಚ್ಯುತನ ನೋಡು, ಆನಂದದಲಿ ಪೂಜೆಮಾಡು ಮಡದಿ ಮಕ್ಕಳು ಹೆದರಿಸಿದರೆ ಮುಂಕೊಂಡು ನೀ ಹೋದಿಯೆ ಕಾಣೋ । ಅಡಕೆಯ ಹೋಳಿಗೆ ಹೋದ ನಾಚಿಕೆ ಆನೆಯ ಕೊಟ್ಟರೆ ಬಾರದೊ ಬಲ್ಲೆ ನಿನ್ನ ಎಲ್ಲ ಮಾತು ಕ್ಷುಲ್ಲಕತನದ ಭ್ರಾಂತು | ಎಲ್ಲರ ಮನೆಯ ದೋಸೆ ತೂತು ಅಲ್ಲವೇನು ನೋಡಿಕೊ ಈ ಮಾತ ವೇದ ತರ್ಕವೆಲ್ಲವು ಭ್ರಾಂತಿ ಆದಿದೇವನ ಕಾಣದನಕ । ಬೂದಿಮುಚ್ಚಿದ ಕೆಂಡದಂತೆ ಬುದ್ಧಿಯಲಿರು ನಾ ಹೇಳೇನಂತೆ ದೊರೆತನವು ಏನು ಹೆಚ್ಚು ಸಿರಿಯು ಏನು ಪಾವನ ಮೆಚ್ಚು | ವರದ ಪುರಂದರವಿಠಲರಾಯನು ಪರಿಪಾಲಿಪನೆಂದು ನೆಚ್ಚು