ಕೀರ್ತನೆ - 564     
 
ಪಾಪಿ ಬಲ್ಲನೆ ಪರರ ಸುಖ - ದುಃಖದಿಂಗಿತವ ಕೋಪಿ ಬಲ್ಲನೆ ದಯಾದಾಕ್ಷಿಣ್ಯವ ಹೇನು ಬಲ್ಲುದೆ ಮುಡಿದ ಹೂವಿನಾ ಪರಿಮಳವ ಶ್ವಾನ ಬಲ್ಲುದೆ ರಾಗಭೇದಂಗಳ ಮೀನು ಬಲ್ಲುದೇ ನೀರು ಚವುಳು - ಸವಿಯೆಂಬುದನು ಹೀನ ಬಲ್ಲನೆ ತನಗೆ ಉಪಕಾರ ಮಾಡಿದುದ? ಕತ್ತೆ ಬಲ್ಲುದೆ ತಾನು ಹೊತ್ತಿರುವ ನಿಧಿಯನ್ನು ಮೃತ್ಯು ಬಲ್ಲುದೆ ದಯಾ - ದಾಕ್ಷಿಣ್ಯವ ತೊತ್ತು ಬಲ್ಲಳೆ ಹೀನ ಮಾನದಭಿಮಾನವನು ಮತ್ತೆ ಬಲ್ಲುದೆ ಬೆಕ್ಕು ಮನೆಯ ಮೀಸಲನು? ಹೇಡಿ ತಾ ಬಲ್ಲನೇ ರಣರಂಗ ಧೀರವನು ಕೋಡಗವು ಬಲ್ಲುದೇ ರತ್ನದಾಭರಣ ಬೇಡಿದುದನೀವ ಪುರಂದರವಿಠಲನಲ್ಲದೆ ನಾಡ ದೈವಗಳೆಲ್ಲ ಕೊಡಬಲ್ಲುವೇ?