ಕೀರ್ತನೆ - 563     
 
ಪಾಪಿಗೇತಕೆ ಪರಮಾತ್ಮ ಬೋಧ ಕೋಪಿಗೇತಕೆ ಸುಗುಣ ಶಾಂತ ಬುದ್ಧಿ ಹಂದಿಗೆ ಗಂಧವೇಕೆ ಅಂಧಕೆ ಕನ್ನಡಿಯೇಕೆ ಮಂದಮತಿ ಮನುಜರಿಗೆ ಮಂತ್ರವೇಕೆ ತಂದೆ - ತಾಯಂದಿರಿಗೆ ಕುಂದು ತರುವ ಮಗಳೇಕೆ ನಿಂದು ವಾದಿಸುವಂಥ ಸತಿಯು ತಾನೇಕೆ ಕತ್ತೆಗಮೃತವೇಕೆ ಎತ್ತಿಗೆ ಕರೆಹವೇಕೆ ತೊತ್ತಿಗೆ ಛತ್ರದ ನೆರಳೇತಕೆ ಕುತ್ತಿಗೆ ಕೊಯ್ಯುವನ ಸೊಗಸು ಮಾತುಗಳೇಕೆ ಸತ್ಯವಿಲ್ಲದೆ ನುಡಿವ ಯೋಗಿಯೇಕೆ ಷಂಡಗೆ ಹೆಂಡತಿಯೇಕೆ ತೊಂಡರಿಗೆ ಖಂಡೆಯವೇಕೆ ಮುಂಡೆಮೋಳಿಗೆ ಮುತ್ತಿನ ದಂಡೆಯೇಕೆ ಮಂಡಳದೊಳಗೆ ಶ್ರೀ ಪುರಂದರವಿಠಲನ ಕಂಡು ಭಜಿಸದ ಮನುಜರಿದ್ದೇತಕೆ