ಕೀರ್ತನೆ - 562     
 
ಪರಾನ್ನವೇತಕೆ ಬಂತಯ್ಯ - ಎನಗೆ ಇಂದು 1 ಪರಾನ್ನವೇತಕೆ ಬಂತಯ್ಯ ಪರಾನ್ನವೇತಕೆ ಬಂತು ಪರಮೇಷ್ಟಿಜನಕನ | ಪರನೆಂದು ತಿಳಿಸದೆ ಪರಗತಿ ಕೆಡಿಸುವ ಸ್ನಾನ ಮಾಡಿಕೊಂಡು - ಕುಳಿತು ಬಹು ಮೌನದಿಂದಿರಲೀಸದು || ಶ್ರೀನಿವಾಸನ ಧ್ಯಾನಮಾಡದೆ ಮನವಿದು । ತಾನೆ ಓಡುವದು ಶ್ವಾನನೋಪಾದಿಯಲಿ ಜಪವ ಮಾಡುವ ಕಾಲದಿ - ಕರೆಯ ಬರೆ | ವಿಪರೀತವಾಗುವುದು || ಸ್ವಪನದಂತೆ ಪೊಳೆದು ನನ್ನ ಮನಕೆ ಬಲು 1 ಸುಪಥವ ತಪ್ಪಿಸಿ ಅಪಗತಿ ಕೊಡುವಂಥ ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ ! ಸ್ವಸ್ಥದಿ ಕುಳಿತುಕೊಂಡು || ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ | ಶಸ್ತ್ರವಾಯಿತು ಎಂದು ಮಸ್ತಕ ತಿರುವುವ ಯಜಮಾನನು ಮಾಡದ ಪಾಪಂಗಳ 1 ವ್ರಜವು ಅನ್ನದೊಳಿರಲು || ದ್ವಿಜರು ಭುಂಜಿಸಲಾಗಿ ಅವರ ಉದರದೊಳು || ನಿಜವಾಗಿ ಸೇರುವುದು ಸುಜನರು ಲಾಲಿಸಿ ಮಾಡಿದ ಮಹಾಪುಣ್ಯವು ಓದನಕಾಗಿ - 1 ಕಾಡಿಗೊಪ್ಪಿಸಿ ಕೊಡುತ | ರೂಢಿಗಧಿಕನಾದ ಪುರಂದರವಿಠಲನ | ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ