ಕೀರ್ತನೆ - 560     
 
ಪತಿಭಕುತಿಯಿಲ್ಲದಿಹ ಸತಿಯ ಸಂಗ ವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿ ಕಂಡಾಡಿ ಏಕವಚನಂಗಳನಾಗ ಅಂಡಲೆದು ಮಾರ್ಮಲೆದು ಕಾಡಿಬೇಡುವ - ಇಂಥ ಭಂಡುದೊತ್ತಿನ ಕೂಟ ಏಳುನಾಗರ ಕಾಟ ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆ ತಂದರೆ ಹತ್ತು ಮನೆಯೊಳಗೊಂದ ಮಾಡಿ ಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದ ದಿಂದ ಹೋಹಳು ನಾರಿ ಬಹು ದೊಡ್ಡ ಮಾರಿ ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತೊಡಲಿಲ್ಲ ಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲ ಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬ ಮೂರ್ಖ ತೊತ್ತಿನ ಸಂಗ ಕುಲಕೆಲ್ಲ ಭಂಗ ತಾಯನು ಹೊರಡಿಸು ತಂದೆಯನು ತೆರಳಿಸು ದಾಯಾದಿಯನು ಮನೆಯಲಿರಿಸಬೇಡ ಬಾಯಿನ್ನು ಮನೆ ಕಟ್ಟಿ ಬೇರಿರುವ ನಾವೆಂಬ ಮಾಯಾಕಾತಿಯ ಸಂಗ ಅಭಿಮಾನ ಭಂಗ ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದು. ಕಷ್ಟ ಸೆರೆಯೆನುವೆನೆ ಈ ಪರಿಯಲಿ ಸೃಷ್ಟಿಗಧಿಕನಾದ ದಿಟ್ಟ ಶ್ರೀ ಪುರಂದರ ವಿಠಲ ಪಶ್ಚಿಮದ ರಂಗಧಾಮ