ನಿಂದೆಯಾಡಲುಬೇಡ ನೀಚಾತ್ಮ- ನಿನ
ಗೆಂದೆಂದು ದೊರಕನು ಪರಮಾತ್ಮ
ನರಜನ್ಮಕೆ ಬಂದು ನೀ ನಿಂತಿ ಪರಿ
ಮಾಡಿದೆಯೊ ಪರದ -ಚಿಂತಿ
ಗರುವದಿಂದ ಹುಲ್ಲುತಿಂತಿ -ಇದು
ಸ್ಥಿರವಲ್ಲ ಮೂರುದಿನದ ಸಂತಿ
ಪರಸತಿಯರ ಕಂಡು ಹೋಗಿ ಅಲ್ಲಿ
ಪರಮಾತ್ಮನ ಧ್ಯಾನವನ್ನು ನೀ ನೀಗಿ
ಪರಲೋಕ ಹೇಗೆ ಕಾಣುವೆ ಕಾಗಿ - ನೀನು
ಪರಪರಿಯಲಿ ನೋಡಲೊ ಗೂಗಿ
ಬಾಳೆಗೆ ಒಂದೇ ಫಲವು ನೋಡು
ಕಳ್ಳಸುಳ್ಳರಿಗೆ ಬಲು ತೋಡು
ಬಾಳ್ವೆವಂತರ ಹುಡುಕಾಡು - ಶ್ರೀ
ಲೋಲ ಪುರಂದರವಿಠಲನೊಳಾಡು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ