ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ 1
ಆಹುದೇನೊ ಹೋಹುದೇನೊ ಇದರಿಂದ ಹರಿಯೆ
ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆಮನೆ ಏಕೆ |
ಮುಚ್ಚಿ ಹೂಳಿದ ಹೊನ್ನು ಹಣವೇತಕೆ 1
ಪಚ್ಚೆ ಮಾಣಿಕ ವಜ್ರ ವೈಡೂರವೇತಕೆ |
ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ
ಹೆಂಡಿರು ಮಕ್ಕಳು- ಏಕೆ ಹಣ ಹೊನ್ನು ಎನಲೇಕೆ |
ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ।।
ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |
ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ
ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |
ಚೆಂದುಳ್ಳ ವಿಹಿತ ಕರ್ಮಗಳೇತಕೆ |
ಇಂದಿರೇಶ ನಮ್ಮ ಪುರಂದರವಿಠಲನ |
ಪೊಂದಿ ಭಜಿಸದವನ ಇಂದ್ರಿಯಂಗಳೇಕೆ