ಕೀರ್ತನೆ - 531     
 
ದಾಸರ ನಿಂದಿಸಬೇಡಲೊ ಪ್ರಾಣಿ - ಹರಿ ದಾಸರ ನಿಂದಿಸಬೇಡ ಮೋಸವಾಯಿತೊ ಮನದೊಳು ಗಾಢ 1 ಲೇಸಾಗಿ ಇದ ತಿಳಕೊ ಮೂಢ ರಾಮನ ನಿಂದಿಸಿ ರಾವಣ ಕೆಟ್ಟ ತಮ್ಮಗಾಯಿತು ಸ್ಥಿರಪಟ್ಟ ॥ ತಾಮಸದಿಂದಲಿ ಕೌರವ ಕೆಟ್ಟ | ಧರ್ಮಗೆ ರಾಜ್ಯವ ಬಿಟ್ಟ ಮನದೊಳಗಿನ ವಿಷಯದ ವಿಷ ಬಿಟ್ಟು | ಅನುದಿನ ಹರಿಯ ನೆನೆಯಿರಣ್ಣ || ಸನಕಾದಿವಂದ್ಯನ ಪೂಜಿಸಿದರೆ ನೀವ್ 1 ಘನ ಪದವಿಯ ಕಾಣುವಿರಣ್ಣ ಕನಕದಾಸನು ಕಬ್ಬಲಿಗನು ಎಂದು । ಅಣಕಿಸಿ ನುಡಿಬೇಡಿರಣ್ಣ | ಜನರಂತೆ ನರನಲ್ಲ ತುಂಬುರನೀತನು | ಜನಕಜೆರಮಣನ ಪಾದಸೇವಕನು ಉಡಿಯ ಒಳಗೆ ಕಿಡಿ ಬಿದ್ದರೆ ಅದು ತಾ । ಸುಡದನಕಾ ಬಿಡದಣ್ಣ || ಬಡವನಾಗಿ ಕೆಡುಬುದ್ಧಿಯ ಬಿಟ್ಟು | ನಡೆಯ ಕಂಡು ಪಡೆದುಕೊಳ್ಳಣ್ಣ ದೇವಕಿ ಸೆರೆಯನು ಬಿಡಿಸಿದ ದೇವನ | ಸೇವಕರು ನರರೆ ನಿಮಗವರು ॥ ಭಾವಜನಯ್ಯನ ಪದವ ನೆನೆದರೆ ಪಾವನ ಮಾಡುವ ಪುರಂದರವಿಠಲ