ಕೀರ್ತನೆ - 528     
 
ತಾಸು ಬಾರಿಸುತಿದೆ ಕೇಳಿ ಹರಿದಾಸರೆಲ್ಲ | ತಾಸು ಬಾರಿಸುತಿದೆ ಕೇಳಿ ಹಾಸುಮಂಚ ಸುಪ್ಪತ್ತಿಗೆಯಲಿ - ಹಗಲು ಇರುಳು | ಹೇಸರಗತ್ತೆಯಂತೆ ಹೊರಳಿ - ಸ್ತ್ರೀಯರಗೂಡ | ಬೇಸರದೆ ನಿತ್ಯವು ಉರುಳಿ || ಈ ಪರಿ ಕಾಲವ ಕಳೆದೆಯೊ ಕಾಲ ಸ | ಮೀಪವಾಯಿತು ಎಂದೀಗಲೆ ವೃದ್ಧ ಯೌವನ ಬಾಲಕಾಲ ವಿವೇಕವಿಲ್ಲದ ಬುದ್ಧಿಮಾಂದ್ಯವು ಹಲವು ಕಾಲ ಆಹಾರಸಂಗ । ನಿದ್ರೆಯಿಂದಲಿ ಅತಿಲೋಲ || ಈಶನ ಭಜಕರ ಭಜಿಸದೆ ಮಾನುಷಾ । ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು ಕಂಡ ವಿಷಯವ ಕಾಮಿಸಿ ಕಷ್ಟಪಡದೆ । ತಾಂಡವ ಕೃಷ್ಣನ ಭಜಿಸಿ ಪುಂಡನೆನಿಸದೆ ಭಂಡಧಾವತಿಯನು ತ್ಯಜಿಸಿ | ಪುಂಡರೀಕಾಕ್ಷ ಪುರಂದರವಿಠಲನ । ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು