ಕೀರ್ತನೆ - 524     
 
ತನಗಲ್ಲದಾ ವಸ್ತು ಎಲ್ಲಿದ್ದರೇನು ಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ಆದರಣೆಯಿಲ್ಲದೂಟ ಅಮೃತಾನ್ನವಾದರೇನು ವಾದಿಸುವ ಸತಿ - ಸುತರಿದ್ದು ಫಲವೇನು ಕ್ರೋಧ ಬಳೆಸುವ ಸಹೋದರರು ಇದ್ದರೇನು ಮಾದಿಗರ ಮನೆಯೊಳು ಮದುವೆಯಾದರೇನು ನಾಲಿಗಿಲ್ಲದ ಪದವು ಸಂಚಿತುಂಬ ಇದ್ದರೇನು ದೇವಾಂಕಿತವಿಲ್ಲದ ಕವಿತ್ವವೇನು ಹೇವವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನು ಹಾವಿನ ಘಣಿಯೊಳಗೆ ಹಣವಿದ್ದರೇನು ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನು ತನ್ನ ತಾನರಿಯದ ಜ್ಞಾನವೇನು ಎನ್ನುತ ಪುರಂದರವಿಠಲನ ನೆನೆಯದವ ಸಂನ್ಯಾಸಿಯಾದರೇನು ಪಂಡಿತನಾದರೇನು