ಡೊಂಕುಬಾಲದ ನಾಯಕರೆ
ನೀವೇನೂಟವ ಮಾಡಿದಿರಿ |
ಕಣಕ ಕುಟ್ಟುವಲ್ಲಿಗೆ ಹೋಗಿ ।
ಹಣಿಕಿ ಹಣಿಕಿ ನೋಡುವಿರಿ |
ಕಣಕ ಕುಟ್ಟೋ ಒನಕಿಲಿಬಡಿದರೆ |
ಕುಂಯ್ ಕುಂಯ್ ರಾಗವ ಮಾಡುವಿರಿ
ಹುಗ್ಗಿ ಮಾಡುವಲ್ಲಿಗೆ ಹೋಗಿ ।
ತಗ್ಗಿ ಬಗ್ಗಿ ನೋಡುವಿರಿ |
ಹುಗ್ಗಿ ಮಾಡುವ ಸವಟಿಲಿ ಬಡಿದರೆ |
ಕುಂಯ್ ಕುಂಯ್ ರಾಗವ ಮಾಡುವಿರಿ
ಹಿರಿಯ ಬೀದಿಯಲಿ ಓಡುವಿರಿ |
ಕರಿಯ ಬೂದಿಯಲಿ ಹೊರಳುವಿರಿ |
ಪುರಂದರವಿಠಲರಾಯನ ಈ ಪರಿ
ಮರೆತು ಸದಾ ನೀವು ತಿರುಗುವಿರಿ *
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ