ಕೀರ್ತನೆ - 517     
 
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯ ಪಾತಕಗಳನರಿಯದವ ಮನುಜನೆ ಕೃಷ್ಣ ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ಊರೊಳಗಿನಾ ಕಳ್ಳ ಅವ ಸುಜನನೆ ಜಾರತನವೆಸಗುವಳು ಕುಲವನಿತೆಯಹುದೆ -ಸಂ ಸಾರದೆಚ್ಚವಿಲ್ಲದವ ಸುಗಣನೆ ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ಕಾನನದೊಳಿಹ ಕಾಗೆ ವನವಾಸಿಯೇ ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕ ಧ್ಯಾನವನು ಮಾಡಲದು ಮೌನವೇ ಕೃಷ್ಣಾ ತೋಳ ಅಡವಿಯಲಿರಲು ಅದು ದಿಗಂಬರನಹುದೆ ಗಾಳಿಯುಂಬುವ ಉರಗ ಉಪವಾಸಿಯೇ ಆಲವದು ಜಡೆಬಿಡಲು ಪರಮ ಋಷಿಯಹುದೆ -ಬಲು ಕಾಲ ಉಳಿದ ಹದ್ದು ತಾ ಹಿರಿಯದೆ ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ಸಿಂಧುಜವು ಎನೆ ವಿಷಯ ಶೀತಕರನೆ ಅಂಧಕನು ಕಣ್ಮುಚ್ಚಲದು ಧ್ಯಾನವೇ ಗಜವು ಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ಮಂಡೂಕ ಗಂಟಲನು ಮಾಡಲದು ಮಂತ್ರವೆ ಗುಂಡು ನೀರಲಿ ಮುಳುಗಲದು ಸ್ನಾನವೇ ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ತೊಂಡನಾಗದ ನರನ ಬಾಳು ಬಾಳುವೆಯೆ