ಕೀರ್ತನೆ - 516     
 
ಘಾತಕರಿಗಿನ್ನೇಕೆ ಪರಮಾರ್ಥ ಶ್ರವಣ ನೀತಿವಂತರೆ ನಿಮಗೆ ಪರನಿಂದೆ ಏಕೆ ಕೋತಿಗಂದಣವೇಕನಾಥನಿಗೆ ಮುನಿಸೇಕೆ ಹೋತು ಕಾಳಗವಾಡೆ ಖ್ಯಾತಿಯೇಕೆ ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ದಯವಂತನಲ್ಲದಾ ದೊರೆಯ ಸೇವೆಯು ಏಕೆ ಭಯವು ಉಳ್ಳವಗೆ ರಣರಂಗವೇಕೆ ನಯವಾಕ್ಯವಿಲ್ಲದ ಪುರುಷ ನಾರಿಯರೇಕೆ ವ್ಯಯವಾದ ಧನಕಿನ್ನು ಚಿಂತೆಯೇಕೆ ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆ ಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ಚೆಲ್ವ ಶ್ರೀ ಪುರಂದರ ವಿಠಲನ ದಯವಿರಲು ಘಲ್ಲಿಸುವ ಯಮಗಿನ್ನು ಅಂಜಬೇಕೆ