ಕೊಡುವ ಕರ್ತ ಬೇರೆ ಇರುತಿರೆ
ಬಿಡುಬಿಡು ಚಿಂತೆಯನು
ಒಡೆಯನಾಗಿ ಮೂಜಗವನು ಪಾಲಿಪ |
ಬಡವರಾಧಾರಿಯು ಭಕ್ತರ ಪ್ರಿಯನು
ಕಲ್ಲಿನೊಳಗೆ ಇರುವ ಕಪ್ಪೆಗೆ - 1
ಅಲ್ಲೆ ಉದಕಕೊಡುವ |
ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |
ವಲ್ಲಭ ಶ್ರೀಹರಿ ಎಲ್ಲಿಯು ಇರುತಿರೆ
ಆನೆಗೈದುಮಣದಾ ಆಹಾರವ |
ತಾನೆ ತಂದು ಕೊಡುವ |
ದೀನರೊಡೆಯ ಶ್ರೀನಿವಾಸ ದಯಾನಿಧಿ ।
ಮಾನದಿಂದಲಿ ಕಾಯ್ದ ಭಾನುಕೋಟಿ ತೇಜ
ಸರಸಿಜಾಕ್ಷ ತನ್ನ - ಸೇರಿದ 1
ನರರನು ಬಿಡನಣ್ಣ |
ಪರಮದಯಾನಿಧಿ ಭಕುತರ ಸಲಹುವ |
ಪುರಂದರವಿಠಲನು ಪುಷ್ಪಶರನ ಪಿತ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ