ಕೀರ್ತನೆ - 508     
 
ಕೇಳನೊ ಹರಿ ತಾಳನೋ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲ ಧ್ವನಿಸಾರವಿದ್ದು || ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ ಕೂಗಾಟ ನಾನಾಬಗೆಯ ಭಾವ ರಾಗ ತಿಳಿದು ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು || ದಾನವಾರಿಯ ದಿವ್ಯ ನಾಮರಹಿತವಾದ ಹೀನ ಸಂಗೀತ ಸಾಹಿತ್ಯವ ಮನವಿತ್ತು ಅಡಿಗಡಿಗಾನಂದ ಬಾಷ್ಪ ಪುಳಕದಿಂದ ನುಡಿನುಡಿಗೂ ಶ್ರೀಹರಿಯೆನ್ನುತ | ದೃಢಭಕ್ತರನು ಕೂಡಿ ಹರಿಕೀರ್ತನೆಯ ಪಾಡಿ ಕಡೆಗೆ ಪುರಂದರವಿಠಲನೆಂದರೆ ಕೇಳ್ವ