ಕೇಳು ಕೋಪಿಸಬೇಡ ಹೇಳಲಿಕಂಜುವೆ
ಬಾಳು ಬಡತನವ ನಾನು
ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲ
ಬಲು ಭಂಡ ನಿನ್ನಯ ಕಿರಿಯ ಮಗ |
ಲಲನೆಯು ಸೇರಿದಳು ಬಲು ಲೋಭಿಗಳ ಮನೆಯ
ಹೊಲಕುಲವರಿಯಳು ನಿನ್ನ ಸೊಸೆಯು ರಂಗ
ಮಗಳ ಮಾರ್ಗವು ಡೊಂಕು | ಮೈದುನ ಗುರುದ್ರೋಹಿ
ಮಗನ ಮಗನು ಚಾಡಿಗಾರ
ಹಗರಣಕೆ ನೀಚರ ಹಣ್ಣುಮೆದ್ದೆಂಜಲ
ಜಗದೊಡೆಯನೆನಿಸಿಕೊಂಡೆ - ನೀನುಂಡೆ
ಲಕ್ಷ್ಮೀಪತಿಯು ಎನಿಸಿ ಭಿಕ್ಷೆ ಬೇಡಲು ಪೋದೆ
ಪಕ್ಷಿಯ ಪೆಗಲೇರಿ ರಾಜನೆನಿಸಿದೆ |
ಸಾಕ್ಷಾತು ಪುರಂದರವಿಠಲನೆ ನಿನ್ನ ಗುಣ
ಲಕ್ಷಣ ಪೇಳಲಳವೆ - ಕಳೆವೆ