ಕೇಶವ ನಾರಾಯಣ ಮಾಧವ-ಹರಿ ।
ವಾಸುದೇವ ಎನಬಾರದೆ ?
ಕೇಶವನ ನಾಮವನು ಏಸು ಬಾರಿ ನೆನೆದರೂ ।
ದೋಷಪರಿಹವಪ್ಪುದು - ಹೇ ಜಿಹ್ವೆ
ಜಲಜನಾಭನ ನಾಮವು - ಈ ಜಗ - 1
ದೊಳು ಜನಭಯಹರಣ ||
ಸುಲಭವೇದ್ಯನೆನಲೇಕೆ ಸುಖಕೆ ಸಾಧನವಿದು |
ಬಲಿಯೆಂಬ ಭಕ್ತನು ಬಗೆದು ರಸವನುಂಡು ಹೇ ಜಿಹ್ವೆ
(ಎರಡನೇ ನುಡಿ ಸಿಕ್ಕಿಲ್ಲ)
ಹೇಮಕಶ್ಯಪ ಸಂಹಾರ - ಭಕ್ತರು ನಿನ್ನ !
ನಾಮವ ಸವಿದುಂಬರು ||
ವಾಮನ ವಾಮನನೆಂದು ವಂದಿಸಿದವರಿಗೆ 1
ಶ್ರೀಮದನಂತ ಪುರಂದರವಿಠಲನು
ಕಾಮಿತ ಫಲವೀವನು ಹೇ ಜಿಹ್ವೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ