ಕೃಷ್ಣ ಮಂತ್ರವ ಜಪಿಸೊ – ಏ ಮನುಜ ।
ಕೃಷ್ಣ ಮಂತ್ರವ ಜಪಿಸೊ
ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು
ಜಪತಪಾನುಷ್ಠಾನ ಸ್ನಾನಕ್ಕೆ ಈ ಮಂತ್ರ |
ಕಪಟಬುದ್ದಿಗಳನ್ನು ಕುಟ್ಟುವ ಮಂತ್ರ ॥
ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ
ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ
ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |
ನಿಖಿಳ ದೇವರಿಗೆಲ್ಲ ಸಾಕ್ಷೀಭೂತದ ಮಂತ್ರ |
ಭಕುತಿಯಲಿ ದ್ರೌಪದಿಯು ಭಜಿಸಿದ ಈ ಮಂತ್ರ
ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ
ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |
ಜೀವಗಳಿಗೆಲ್ಲ ಸಂಜೀವ ಮಂತ್ರ ॥
ಪಾವನ ಮಾಡಿ ಪಾಲಿಪುದೀ ಮಂತ್ರ
ದೇವ ಪುರಂದರವಿಠಲ ಮಹಾಮಂತ್ರ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ