ಕಣ್ಣಿನೊಳಗೆ ನೋಡೊ ಹರಿಯ -ಒಳ -
ಗಣ್ಣಿನಿಂದಲಿ ನೋಡೊ ಮೂಜಗದೊಡೆಯನ
ಆಧಾರ ಮೊದಲಾದ ಆರು - ಚಕ್ರ
ಶೋಧಿಸಿ ಸುಡಬೇಕು ಈಷಣ ಮೂರು ||
ಸಾಧಿಸಿ ಸುಷಮ್ನ ಏರು ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು
ಎವೆಹಾಕದೆ ಮೇಲೆ ನೋಡು -ಮುಂದೆ
ತವಕದಿಂದಲಿ ವಾಯುಬಂಧನ ಮಾಡು ||
ಸವಿದು ನಾದವ ಪಾನಮಾಡು- ಅಲ್ಲಿ
ನವವಿಧ ಭಕ್ತಿಯಲಿ ನಲಿನಲಿದಾಡು
ಅಂಡದೊಳಗೆ ಆಡುತಾನೆ- ಭಾನು-
ಮಂಡಲ ನಾರಾಯಣನೆಂಬುವನೆ |
ಕುಂಡಲಿ ತುದಿಯೊಳಿದ್ದಾನೆ - ಶ್ರೀ ಪು-
ರಂದರ ವಿಠಲನು ಪಾಲಿಸುತಾನೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ