ಏನೇನ ಮಾಡಿದರೇನು ಫಲವಯ್ಯ
ಭಾನುಕೋಟಿ ತೇಜ ಶ್ರೀನಿವಾಸನ ಭಜಿಸದೆ
ಹಲವು ಓದಿದರೇನು ಹಲವು ಕೇಳಿದರೇನು
ಜಲದೊಳು ಮುಳುಗಿ ಕುಳಿತಿದ್ದರೇನು
ಛಲದಿಂದ ಮುಸುಕಿಟ್ಟು ಬೆರಳನೆಣಿಸಿದರೇನು
ಚೆಲುವ ದೇವನೊಳು ಎರಕವಿಲ್ಲದಾತನ
ಅನ್ನ ಜರೆದು ಅರಣ್ಯ ಚರಿಸದರೇನು
ಉನ್ನತ ವ್ರತಗಳಾಚಾರಿಸಿದರೇನು
ಚೆನ್ನಗಾತಿಯ ಸಂಗ ಬಿಟ್ಟು ಇದ್ದರೇನು
ಗಾನಲೋಲನಲಿ ಎರಕವಿಲ್ಲದನಕ
ಬತ್ತಲೆ ತಿರುಗಿ ಅವಧೂತನೆನಿಸಿದರೇನು
ತತ್ವ ವಾಕ್ಯಂಗಳ ಪೇಳಿದರೇನು
ಚಿತ್ತಜನಯ್ಯ ಶ್ರೀ ಪುರಂದರವಿಠಲನ
ಚಿತ್ತದೊಳಿರಿಸಿ ಒಲಿಸಿಕೊಳ್ಳದನಕ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ