ಕೀರ್ತನೆ - 484     
 
ಏಕೆ ಮುರ್ಖನಾದೆ-ಮನುಜಾ ಏಕೆ ಮುರ್ಖನಾದೆ ? ಏಕೆ ಮೂರ್ಖನಾದೆ ನೀನು ಕಾಕು ಬುದ್ದಿಗಳನು ಬಿಟ್ಟು ಲೋಕನಾಥನ ನೆನೆಯೊ ಮನುಜಾ ಮಕ್ಕಳು ಹೆಂಡರು ತನ್ನವರೆಂದು ರೊಕ್ಕವನು ಗಳಿಸಿಕೊಂಡು ಸೊಕ್ಕಿಂದ ತಿರುಗುವರೇನೊ ಹೇ ಮನುಜಾ ಕಕ್ಕಸದ ಯಮದೂತರು ಬಂದು ಲೆಕ್ಕವಾಯಿತು ನಡೆಯೆಂದರೆ ಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ ಅರಿಷಡ್ವರ್ಗದ ಆಟವ ಬಿಟ್ಟು ಪುರಂದರವಿಠಲನ ಹೊಂದಲುಬೇಕು ಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ