ಕೀರ್ತನೆ - 483     
 
ಏಕೆ ದೇಹವನು ದಂಡಿಸುವೆ ವೃಥಾ-ಬಿಡ-1 ದೇಕ ಚಿತ್ತದಿ ಲಕ್ಷ್ಮೀಕಾಂತ ಹರಿ ಎನ್ನದೆ ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - 1 ಮೌನವನು ಪಿಡಿದು ಬಕಪಕ್ಷಿಯಂತೆ । ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು || ದಾನವಾಂತಕನ ನಾಮಕೆ ಮೌನವುಂಟೆ ? ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ । ಗುಪಿತದಿಂದಲಿ ನೀನು ಕುಳಿತು ಫಲವೇನು ॥ ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ॥ ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ । ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? । ಸಂದೇಹವೇಕೆ ನೀನೊಂದು ಕ್ಷಣವಗಲದೆ | ತಂದೆ ಶ್ರೀ ಪುರಂದರವಿಠಲನ ನೆನೆಮನವೆ