ಏಕೆ ಚಿಂತಿಸುತಿರುವೆ ಕೋತಿಮನವೆ |
ಶ್ರೀಕೃಷ್ಣರಾಯನನು ಸ್ತುತಿಸಲೊಲ್ಲದಲೆ
ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |
ಕಟ್ಟಕಡೆಯಲಿ ಲಯಕೆ ಏನು ಚಿಂತೆ ? ॥
ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ ? ।
ಕಟ್ಟಕಡೆಯಲಿ ಮೂರು ಬಟ್ಟೆ ತಾನಲ್ಲವೆ ?
ನವಿಲಿಂಗೆ ಚಿತ್ರಪತ್ರವನಾರು ಬರೆದವರು ? ।
ಪವಳಜಾತಿಗೆ ಕೆಂಪನಾರಿತ್ತರು ? ॥
ಸವಿಮಾತಿನರಗಿಳಿಗೆ ಹಸಿರಾರು ಬರೆದವರು ? ।
ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ?
ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |
ವಸುಧೆಯನು ಬಸಿರೊಳಗೆ ಹೆತ್ತರಾರು ?
ವಸುದೇವಸುತ ನಮ್ಮ ಪುರಂದರವಿಠಲನ 1.
ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ