ಏಕೆ ಕಕುಲಾತಿ ಪಡುವೆ - ಎಲೆ ಮನವೆ
ಲೋಕವನೆ ಸಲಹುವ ಶ್ರೀನಿವಾಸನು ನಮ್ಮ |
ಸಾಕಲಾರದೆ ಬಿಡುವನೇ ಮನವೆ
ಆನೆಗಳಿಗಯ್ದಾರುಮಣವಿನಾಹಾರ
ವನು ಅಲ್ಲಿ ತಂದಿತ್ತವರದಾರೊ 1
ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ !
ತಾನುಣಿಸದಲೆ ಬಿಡುವನೇ ಮರುಳೆ
ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನು
ಅಲ್ಲಿ ತಂದಿತ್ತವರದಾರೊ |
ಎಲ್ಲವನು ತೊರೆದು ಅರಣ್ಯ ಸೇರಿರ್ದವರ |
ಅಲ್ಲಿ ನಡೆಸದೆ ಬಿಡುವನೇ - ಮರುಳೆ
ಅಡವಿಯೊಳಗೆ ಪುಟ್ಟುವಾ ಮೃಗಕುಲಕ್ಕೆಲ್ಲ
ಒಡೆಯನಾರುಂಟು ಪೇಳೊ |
ಗಿಡದಿಂದ ಗಿಡಕೆ ಹಾರುವ ಪಕ್ಷಿಗಳಿಗಲ್ಲಿ 1
ಪಡಿಯ ನಡೆಸದೆ ಬಿಡುವನೇ ಮರುಳೆ
ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆ
ಮಂಡೆ ದಡ್ಡಾಯಿತಲ್ಲ |
ಭಂಡ ಮನವೇ ನೀನು ಕಂಡವರಿಗೆರಗದಿರು
ಕೊಂಡಾಡಿ ಹರಿಯ ಭಜಿಸೋ ಮರುಳೆ
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನು
ಬೆಂಬಿಡದೆ ಸಲುಹುತಿಹನು |
ನಂಬು ಶ್ರೀ ಪುರಂದರವಿಠಲನ ಪಾದವನು
ನಂಬಿದರೆ ಸಲಹದಲೆ ಬಿಡುವನೇ- ಮರುಳೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ