ಕೀರ್ತನೆ - 476     
 
ಎಲ್ಲವನು ಬಲ್ಲೆನೆನ್ನುವಿರಲ್ಲ ಸಲ್ಲದ ಗುಣ ಬಿಡಲಿಲ್ಲ ಸೊಲ್ಲಿಗೆ ಶರಣರ ಕಥೆಗಳ ಪೇಳುತ ಅಲ್ಲದ ನುಡಿಗಳ ನುಡಿಯುವಿರಲ್ಲ ಕಾವಿಯನುಟ್ಟು ತಿರುಗುವಿರಲ್ಲ ಕಾಮವ ಬಿಡಲಿಲ್ಲ ನೇಮ - ನಿಷ್ಠೆಗಳ ಮಾಡುವಿರಲ್ಲ. ತಾಮಸ ಬಿಡಲಿಲ್ಲ ತಾವೊಂದರಿಯದೆ ಪರರಲಿ ತಿಳಿಯದೆ ಕೀವದ ಕುಳಿಯಲಿ ಬೀಳುವಿರಲ್ಲ ಗುರುಗಳ ಸೇವೆಯ ಮಾಡಿದಿರಲ್ಲ ಗುರುತಾಗಲೆ ಇಲ್ಲ ಪರಿಪರಿ ದೇಶವ ತಿರಿಗಿದಿರಲ್ಲ ಪೊರೆಯುವರಿನ್ನಿಲ್ಲ ಅರಿವೊಂದರಿಯದೆ ಆಗಮ ತಿಳಿಯದೆ ನರಕಕೂಪದಲಿ ಬೀಳುವಿರಲ್ಲ ಬ್ರಹ್ಮಜ್ಞಾನಿಗಳೆನಿಸುವಿರಲ್ಲ ಹಮ್ಮನು ಬಿಡಲಿಲ್ಲ ಸುಮ್ಮನೆ ಯಾಗವ ಮಾಡುವಿರಲ್ಲ ಹೆಮ್ಮೆಯ ಬಿಡಲಿಲ್ಲ ಗಮ್ಮನೆ ಪುರಂದರವಿಠಲನ ಪಾದಕೆ ಒಮ್ಮೆಯಾದರು ನೀವೆರಗಲೆ ಇಲ್ಲ