ಕೀರ್ತನೆ - 474     
 
ಎಚ್ಚರಿಕೆ ಎಚ್ಚರಿಕೆ ಮನವೆ - ನಮ್ಮ ಅಚ್ಯುತನ ಪಾದಾರವಿಂದ ಧ್ಯಾನದಲಿ ಆಶಾಪಾಶದೊಳಗೆ ಸಿಲುಕಿ -ಬಹು ಕ್ಲೇಶಪಟ್ಟು ತುಚ್ಛ ಸುಖದಿ ಮರುಳಿಕ್ಕಿ ಹೇಸಿ ಸಂಸಾರದಲಿ ಸಿಲ್ಕಿ - ಮಾಯಾ ಕ್ಲೇಶ ಅಂಬರ ಕೆಳಗೆ ಮೈಮರೆತು ಸೊಕ್ಕಿ ಹಣ - ಹೆಣ್ಣು - ಮಣ್ಣಾಸೆ ವ್ಯರ್ಥ - ಈ ತನುವಿಗೆ ಯಮಪುರ ಪಯಣವೇ ನಿತ್ಯ ಮೂರು ಶೃಂಗಾರಗಳು ಮಿಥ್ಯ ಅಂತ ಕನ ಯಾತನೆಗಳಿಗೆ ಹರಿನಾಮ ಪಥ್ಯ ತೊಗಲ ಚೀಲ ಒಂಬತ್ತು ಹರುಕು - ನರ ಬಿಗಿದು ಕಟ್ಟಿ ಒಳಗೆ ಎಲುವುಗಳ ಸಿಲುಕು ಬಗೆರಕ್ತ - ಮಾಂಸದ ಹುಳುಕು – ಒ ಳಗೆ ಮಲ ಕಫ - ವಾತ ಪಿತ್ತದ ಸರಕು ದುಷ್ಟರ ಸಹವಾಸ ಹೀನ ಬಲು ಇಷ್ಟ ಜನಸಂಗವು ಹರಕೆ ಬಹುಮಾನ ಎಷ್ಟು ಓದಿದರಷ್ಟು ಜ್ಞಾನ -ಆದರ ಲ್ಲಿಟ್ಟು ಭಕುತಿಯ ತಿಳಿಯೆಲೊ ಸಾವಧಾನ ನಾಲಿಗೆಯ ಹರಿಯ ಬಿಡಬೇಡ - ತಿಂಡಿ ವಾಳರ ರುಚಿಪಾಕಗಳನೂರಿಸಬೇಡ ಹಾಳು ಮಾತು ಆಡಬೇಡ -ಶ್ರೀ ಲೋಲ ಪುರಂದರವಿಠಲನ ಬಿಡಬೇಡ