ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |
ವಾಸುದೇವನ ನೆನೆದು ಸುಖಿಯಾಗು ಮನವೆ
ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು ।
ಮೇಲೆ ಜವ್ವನ ಹೋಗಿ ಜರೆಯೊದಗಿತು ||
ಕಾಲ-ಕರ್ಮಾದಿಗಳು ಕೂಡಿದಾಕ್ಷಣದಲಿ |
ಬೀಳುವೀ ತನುವಿನೊಳ್ ಇನ್ನಾಸೆಯೆ ಮನವೆ
ದಂತಗಳು ಸಡಿಲಿದುವು ಧಾತುಗಳು ಕುಂದಿದುವು |
ಕಾಂತೆಯರು ಜರಿದು ಓಕರಿಸುವರು ||
ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |
ಸಂತತ ಶ್ರೀಹರಿಯ ನೆನೆಕಾಣೊ ಮನವೆ
ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ ।
ಸಾರುತಿದೆ ನೀ ಮೆಚ್ಚಿ ಮರುಳಾಗದೆ ॥
ಶ್ರೀರಮಣ ಪುರಂದರವಿಠಲನ ನೆನೆನೆನೆದು ।
ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ