ಕೀರ್ತನೆ - 464     
 
ಇರಬೇಕು ಇರದಿರಬೇಕು ಶ್ರೀ - | ಹರಿದಾಸರು ಸಂಸಾರದೊಳು ಕುಲಸತಿಯಾದರೆ ಕೂಡಿರಬೇಕು | ಸುಲಭದಿಂದ ಸ್ವರ್ಗ ಸೂರಾಡಬೇಕು | ಕಲಹಗಂಟಿ ಸತಿ ಕರ್ಕಶೆಯಾದರೆ | ಹಲವು ಪರಿಯಿಂದಲಿ ಹೊರಗಾಗಬೇಕು ಮಕ್ಕಳು ತಾವು ಮತಿವಂತರಾದರೆ 1 ಅಕ್ಕರೆಯಿಂದಲಿ ಕೂಡಿರಬೇಕು ॥ ಚಿಕ್ಕತನದಿ ಬುದ್ಧಿ ತೇರುಂಡರಾದರೆ । ಗಕ್ಕನೆ ಅಲ್ಲಿಂದ ಹೊರಗಾಗಬೇಕು ದುಷ್ಟರ ಕಂಡರೆ ದೂರವಿರಬೇಕು | ಶಿಷ್ಟರ ಕಂಡರೆ ಕೈಮುಗಿಯಬೇಕು ॥ ದಿಟ್ಟ ಶ್ರೀ ಪುರಂದರವಿಠಲರಾಯನ | ಗಟ್ಟಿಯಾಗಿ ಆತನ ನೆರೆನಂಬಬೇಕು