ಇಂತು ಶ್ರುತಿ - ಸ್ಮೃತಿ ಸಾರುತಿದೆ ಕೋ |
ಕಂತುಪಿತನ ಗುಣಗಳ ತಿಳಿಯಬೇಕೆಂದು
ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು !
ತನುವ ತೊಂಡರಿಗಡ್ಡ ಕೆಡವಬೇಕು ॥
ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |
ಘನತೆಯಲಿ ಹರಿಚರಣ ಸ್ಮರಿಸುತಿರಬೇಕು
ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು ।
ಇಂದ್ರಿಯಂಗಳನು ನಿಗ್ರಹಿಸಬೇಕು !
ಚಂದಲೀಲೆಗಳಿಂಗೆ ಮನವೆಳಸದಿರಬೇಕು |
ಇಂದಿರೇಶನ ಪದದ ಪಥವರಿಯಬೇಕು
ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು
ಹೆಂಟೆ ಬಂಗಾರ ಸಮ ತಿಳಿಯಬೇಕು ॥
ಕಂಟಕದ ಭಯಗಳನು ನೀಗುತಿರಬೇಕು ವೈ – |
ಕುಂಠ ಪುರಂದರವಿಠಲನೊಲಿಸಬೇಕು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ