ಕೀರ್ತನೆ - 458     
 
ಆಜ್ಞೆಯಿಂದಾಳಬೇಕಣ್ಣ- ಗಂಡ ನಾಜ್ಞೆಯ ಮೀರಿ ನಡೆವ ಲಂಡಹೆಣ್ಣ ಅತ್ತೆ - ಮಾವನಿಗಂಜದವಳ ತನ್ನ ಉತ್ತಮ ಪುರುಷನ ಜರಿದು ಝಂಕಿಪ ನೃತ್ಯರ ಕಂಡು ಬಾಧಿಪಳ - ನಡು ನೆತ್ತಿಯಿಂದಲೆ ಮೂಗ ಕೆತ್ತಬೇಕವಳ ಹಟ್ಟಿ - ಹಟ್ಟಿ ತಿರುಗುವಳ -ತನ್ನ ಗಟ್ಟಿತನದಿ ಮಾತು ಮಲೆತು ನುಡಿಯುವಳ ಬಿಟ್ಟಕುಚವ ತೋರಿಸುವಳ ಇನ್ನು ಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ ಎಂದೂ ಈ ಪರಿಯಿರುವವಳ - ಇನ್ನು ಕೊಂದು ಮಾಡುವುದೇನು ಬಿಡಬೇಕವಳ ಒಂದಿಷ್ಟು ಗುಣವಿಲ್ಲದವಳ -ಪು ರಂದರವಿಠಲರಾಯನಗಲ್ಲದವಳ