ಕೀರ್ತನೆ - 455     
 
ಆವ ಕುಲವಾದರೇನು ಭಾವದ ಎಲ್ಲಾನ ತಿಳದವನಿಗೆ ಮತ್ತೇ ಹಸಿಕಬ್ಬುಡೊಂಕು ಇರಲು - ಅದರೊಳಗಿದ್ದ ರಸ ತಾನು ಡೊಂಕೇನಲೊ ಮರುಳೆ ವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳ ಹಸನಾಗಿ ಕೇಳು ಕಾಣೋ ಮನುಜಾ ನಾನಾವರ್ಣದ ಆಕಳ- ಕ್ಷೀರದಲಿ ನಾನಾವರ್ಣಗಳಹುದೆ- ಮನುಜಾ ಹೀನ ಭಾವನೆಗಳನಿಂದಿಟ್ಟು ನೀ ಪೋಗಿ ಜ್ಞಾನಿಗಳ ಕೇಳು ಕಾಣೋ ಮನುಜಾ ಶರಧಿಯೊಳ ತೆರೆನೊರೆಗಳಾ -ಪರಿಯಂತೆ ಶರೀರವಲ್ಲದೆ ಬೇರಿಹುದೇ ? ವರಪುರಂದರವಿಠಲನ ಸ್ಮರಿಸುತಿರಲು ನಿನಗೆ ಸಿರಿಯು ಮುಕುತಿಯಹುದು ಮನುಜಾ