ಕೀರ್ತನೆ - 454     
 
ಆರು ಹಿತವರು ಮನವೆ ಮೂರು ಮಂದಿಗಳೊಳಗೆ ನಾರಿಯೋ ಧಾರಿಣಿಯೊ ಧನದ ಬಲು ಸಿರಿಯೊ ? ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು ತನ್ನ ಮನೆಯಲ್ಲಿ ಯಜಮಾನಿಯೆನಿಸಿ ಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯು ಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ ಮುನ್ನ ಶತಕೋಟಿ ರಾಯರುಗಳಾಳಿದ ನೆಲನ ತನ್ನದೆಂದು ಶಿಲೆಯ ಶಾಸನವ ಬರೆಸಿ ಬಿನ್ನಣದಿ ಮನೆಗಟ್ಟಿ ಕೋಟೆ - ಕೊತ್ತಳವಿಕ್ಕಿ ಚೆನ್ನಿಗನೆ ಅಸುವಳಿಯ ಊರಹೊರಗಿಕ್ಕುವರು ಉದ್ಯೋಗ – ವ್ಯವಹಾರ ನೃಪಸೇವೆ ಮೊದಲಾಗಿ ಕ್ಷುದ್ರತನ ಕಳವು ಪರದ್ರೋಹದಿಂದ ಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯೆ ಸದ್ಯದಲಿ ಆರುಂಬವರು ಹೇಳು ಮನುಜಾ ಶೋಕಗೈದಳುವವರು ಸತಿ - ಸುತರು ಭಾಂದವರು ಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥ ಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳು ಸಾಕಾರವಾಗಿ ಸಂಗಡ ಬಾಹುವಲ್ಲದೇ ? ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ ಸ್ವಸ್ಥದಲಿ ನೆನೆಕಾಣೋ ಪರಮಾತ್ಮನ ಚಿತ್ತಶುದ್ಧಿಯಲಿ ಶ್ರೀ ಪುರಂದರವಿಠಲನ ಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ