ಆರ ಹಾರೈಸಿದರೇನುಂಟು - ಬರಿ
ಕಡೆದರಲ್ಲೇನುಂಟು ?
ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಎಂತಾದರಲ್ಲಿಯ ತಪ್ಪ ಸಾಧಿಸಿ ಯಮ
ನಂತೆ ಕೊಲುವರಲ್ಲೇನುಂಟು ?
ಕೊಟ್ಟೆ - ಕೊಟ್ಟೆನೆಂದು ಕೊಡದುಪಚಾರದ
ಭ್ರಷ್ಟನ ಸೇರಿದರೇನುಂಟು
ಬಿಟ್ಟಿಯ ಮಾಡಿಸಿ ಬೆದರಿಸಿ ಬಿಡುವ ಕ
ನಿಷ್ಟನ ಸೇರಿದರೇನುಂಟು ?
ಪಿಸುಣನ ಕುದುರೆಯ ಮುಂದೋಡಲು ಬಲು
ಬಿಸಿಲಿನ ಹಣ್ಣಲ್ಲದೇನುಂಟು
ವಸುಧೆಯೊಳಗೆ ಪುರಂದರವಿಠಲನ ಭ
ಜಿಸಲು ಮುಕ್ತಿಸಾಧನವುಂಟು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ