ಕೀರ್ತನೆ - 451     
 
ಆಚಾರವಿಲ್ಲದ ನಾಲಿಗೆ -ನಿನ್ನ - ನೀಚಗುಣವ ಬಿಡು ನಾಲಿಗೆ ನಾಚಿಕೆ - ಲಜ್ಜೆಯ ನೀ ಮುನ್ನ ಅರಿಯದೆ | ಚಾಚಿಕೊಂಡಿರುವಂಥ ನಾಲಿಗೆ ಇದ್ದಮಾತನಾಡು ನಾಲಿಗೆ ಹಿಡಿ - | - ದೊದ್ದರೂ ಹುಸಿಬೇಡ ನಾಲಿಗೆ || ಇದ್ದುಕೊಂಡು ಉಣ್ಣು ಅಮೃತಾನ್ನಗಳನು | ಬುದ್ದಿಯಲಿರು ಕಂಡೆಯ ನಾಲಿಗೆ ಬಡವರ ಮಾತಿಗೆ ನಾಲಿಗೆ - ನೀ | ಕಡುಚತುರ ನುಡಿಯದಿರು ನಾಲಿಗೆ ಹಿಡಿದು ಕೊಂಡೊಯ್ದರು ಯಮನ ಭಟರು ನಿನ್ನ | ನುಡಿ ಕಂಡೆಯ ಹರಿಯೆಂದು ನಾಲಿಗೆ ಹರಿಪಾದವೆ ಗತಿಯೆಂದು ನಾಲಿಗೆ - ನಿನಗೆ | ಪರರ ಚಿಂತೆಯೇಕೆ ನಾಲಿಗೆ || ಸಿರಿವರ ಪುರಂದರವಿಠಲರಾಯನನು | ಮರೆಯದೆ ನೆನೆ ಕಂಡೆಯ ನಾಲಿಗೆ