ಕೀರ್ತನೆ - 449     
 
ಅರಿಯದಧಮನ ಸಂಗ ಕರಗಿದ್ದ ಹಿತ್ತಾಳೆ ಒರೆದು ನೋಡಲು ಬಣ್ಣ ಬರುವುದೇ ಹೇಳಿ ಮಂಜುನೀರನೆ ತಂದು ಚಂದನವ ಹದಮಾಡಿ ಒಂದಾಗಿ ಕೂಡಿ ಪರಿಮಳವ ಬೇಗ ಹಂದಿಯನು ಕರೆದು ಸಲೆ ಪೂಸಲು ಅದು ತನ್ನ ಗಂಜಲವ ನೆನೆನೆನೆದು ಹೋಹಂತೆ ರಮಣಿ ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿ ಶ್ವಾನನನು ಕರೆದು ಬಾಯೊಳಗಿರಿಸಲು ತಾನದನು ಸವಿಸವಿದು ನೋಡಲರಿಯದೆ ತನ್ನ ದನದ ಮೂಳೆಯ ನೆನೆದು ಹೋಹಂತೆ ರಮಣಿ ಅಂತರವನರಿಯದಲೆ ಮೀಯ ಹೋಗುವುದರಿಂದ ಅಂತೆ ಇರುವುದೇ ಲೇಸು ಬಹು ಪ್ರೌಢರು ಚಿಂತಿತಾರ್ಥವನೀವ ಸುಗುಣ ಪುರಂದರವಿಠಲ ನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲದೆ