ಕೀರ್ತನೆ - 447     
 
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ | ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ | ಸವಿಗಂಡ ಊಟಗಳ ಉಣಲರಿಯದೆ । ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು | ಜವನ ದೂತರು ಬಂದು ಎಳೆವ ಹೊತ್ತರಿಯೆ ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ | ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು | ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ | ತನ್ನ ದೂತರು ಬಂದು ಎಳೆವ ಹೊತ್ತರಿಯೆ ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ | ಬಸಿರಿ ಹೆಂಡತಿ ಮಗನ ಮದುವೆಯು ನಾಳೆ || ಹಸನವಾಗಿದೆ ಬದುಕು ಸಾಯಲಾರೆನು ಎನಲು | ವಿಷಮ ದೂತರು ಬಂದು ಎಳೆವ ಹೊತ್ತರಿಯೆ ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ ಮತ್ತೊಬ್ಬ ಮಗನ ಉಪನಯನ ನಾಳೆ || ಅರ್ಥಿಯಾಗಿದೆ ಬದುಕು ಸಾಯಲಾರೆನು ಎನಲು | ಮೃತ್ಯು ಹೆಡತಲೆಯಲಿ ನಗುತಿಹುದರಿಯೆ ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ | ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ | ಕಟ್ಟಕಡೆಯ ದಿವಸ ತುಂಬಿದ ಬಳಿಕಿರಲಿಲ್ಲ | ಇಷ್ಟರೊಳು ಪುರಂದರವಿಠಲನ ನೆನೆಮನೆವೆ