ಅಂಜಬೇಡ ಬೇಡವೆಲೆ ಜೀವ - ಭವ - |
ಭಂಜನ ಹರಿಶರಣರ ತಾವ
ಬಂದಷ್ಟರಿಂದಲಿ ಬಾಳಿಕೊ - ಬಲು - |
ಸಂದೇಹಬಂದಲ್ಲಿ ಕೇಳಿಕೊ||
నింದಾ- ಸ್ತುತಿಗಳನ್ನು ತಾಳಿಕೊ- ಗೋ-|
ವಿಂದ ನಿನ್ನವನೆಂದು ಹೇಳಿಕೊ
ಮಾಧವನಿಗೆ ತನುಮನ ಮೆಚ್ಚು ಕಾಮ |
ಕ್ರೋಧಾದಿಗಳ ಕಲಿಮಲ ಕೊಚ್ಚು -|
ಮೋದತೀರ್ಥವಚನವೆ ಹೆಚ್ಚು ಮಾಯಾ
ವಾದಿಮತಕೆ ಬೆಂಕಿಯ ಹಚ್ಚು
ಪರವನಿತೆಯರಾಶೆಯ ಬಿಡು ನೀ
ಹರಿಸರ್ವೋತ್ತಮನೆಂದು ಕೊಂಡಾಡು ||
ಪರಮಾತ್ಮನ ಧ್ಯಾನವ ಮಾಡು ನಮ್ಮ - |
ಸಿರಿ ಪುರಂದರವಿಠಲನ ನೀ ನೋಡು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ