ಅನುಗಾಲವು ಚಿಂತೆ ಮನುಜಗೆ |
ಮನಹೋಗಿ ಮಾಧವನ ಒಡಗೂಡುವನಕ
ಹೆಂಡಿರಿದ್ದರು ಚಿಂತೆ ಹೆಂಡಿರಿಲ್ಲದ ಚಿಂತೆ ।
ತೊಂಡು ಕುರೂಪಿಯಾದರು ಚಿಂತೆಯು ॥
ತೊಂಡನಾಗಿ ತಿರುಗಿ ತುತ್ತ ತರುವ ಚಿಂತೆ |
ಮಂಡೆ ಬೀಳುವ ತನಕ ಚಿಂತೆ ಕಾಣಣ್ಣಾ
ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ |
ಕೊಡಧನ ಕೈಯೊಳಿದ್ದರು ಚಿಂತೆಯು ।
ಬಡವನಾಗಿ ತಿರುಗಿ ತುತ್ತ ತರುವ ಚಿಂತೆ !
ಪೊಡವಿಯೊಳಿಲ್ಲದ ಚಿಂತೆ ಕಾಣಣ್ಣಾ
ಮನೆಯಿದ್ದರೂ ಚಿಂತೆ ಮನೆಯಿಲ್ಲದ ಚಿಂತೆ ।
ಮನೆಭಾರವತಿಯಾದರೂ ಚಿಂತೆಯು ।
ಮನಸಿಜನಯ್ಯ ಶ್ರೀ ಪುರಂದರವಿಠಲನ |
ನೆನೆದರೆ ಚಿಂತೆಯೆ ಇಲ್ಲ ಕಾಣಣ್ಣಾ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ