ಕೀರ್ತನೆ - 444     
 
ಅಕ್ಕಟಕ್ಕಟೆನ್ನಗಂಡ ವೈಷ್ಣವನಾದ ಕಾರಣ | ರಕ್ಕಸಾಂತಕನ ಭಜಿಸಿ ರಚ್ಚೆ ಗೂಡಾಯಿತೆಂನ ಬದುಕು | ಅಕ್ಕಟಕ್ಕಟಿಂನ ಗಂಡ ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ | ಬಡ್ಡಿವಾಸಿಂರೊಳಗೆ ನಾವು ಸುಖದೊಳಿದ್ದೆವು । ಅಡ್ಡ ಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ | ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ ಹೆಡಿಗೆ ತುಂಬ ದೇವರು ನಮ್ಮ ಮನೆಯೊಳಿರುವ ಕಾಲದಲ್ಲಿ ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವು ಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮ ಭಜಿಸಲಾಗಿ ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯು ಬಿದ್ದಂತಾಯಿತವ್ವ । ಅಕ್ಕಟ ಕಾರಹುಣ್ಣಿಮೆ ಕಾಲದಲ್ಲಿ ಮೂಲಂಗಿ ಬೆಳ್ಳುಳ್ಳಿಗೆಡ್ಡೆ ತಂದು ಕೊಟ್ಟರೆ ದೇವಸುಖವ ಕೊಡುವನೋ । ವೀರವಿಷ್ಣುವಿಗೆ ಕೊಟ್ಟು ತ್ರಾಹಿ ತ್ರಾಹಿ ಎನ್ನಲಾಗಿ ಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿ ಹೋಯಿತವ್ವ । ಅಕ್ಕಟ ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿ ಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೆವೊ ಅರ್ಥಿಕಚ್ಚೆಯಂನು ಬಿಟ್ಟು ನಿತ್ಯ ಕಚ್ಚೆ ಉಡಲಾಗಿ ವಿತ್ತ ಬದುಕುಯೆಲ್ಲ ಹೋಗಿ ವ್ಯರ್ಥವಾಗಿ ಹೋಯಿತವ್ವ |ಅಕ್ಕಟ ಅತ್ತೆ ಮಾವ ಸತ್ತ ದಿವಸ ಪಿತೃಕಾರ್ಯನಡೆಸಲಾಗಿ ಕತ್ತೆ ನಾಯಿ ಹೊರಳಿದಂತೆ ನಂಟುನಂಟರಿಷ್ಟರೂ | ಕರ್ತು ಶ್ರೀ ಪುರಂದರವಿಠಲನ ಭಜಿಸಲಾಗಿ | ತುತ್ತ ಗೊಂಬುದೊಂದು ಕೂಳು ಬೆಲ್ಲದಹಾಗೆ ಆಯಿತವ್ವ