ಕೀರ್ತನೆ - 437     
 
ಸುಣ್ಣವಿಲ್ಲ ಭಾಗವತರೆ 1 ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ ವೀಳೆಯ ಹಾಕುವನಲ್ಲ ವ್ಯಾಧಿಷ್ಟ ನನಗಂಡ || ಬಾಳುಗೇಡಿ ಎನ್ನ ಬಾಯನೋಡಿ || ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ 1 ಕೇಳಿದ ಬಳಿಕಿನ್ನು ಹೇಳದೆ ಫಲವೇನು ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು | ಹೊದ್ದಿತು ಮೂದೇವಿ ಮೈದುನಗೆ ॥ ಬದ್ಧತನದಿ ಸಂಜೆ ಭಂಗಿಮುಕ್ಕುವ ಭಾವ । ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ ಅನ್ನೆಕಾರಿ ಅತ್ತೆ ತೊನ್ನುಬಡಕ ಮಾವ | ಗನ್ನ ಘಾತಕಿರಂಡೆ ಅತ್ತಿಗೆ ಮುಂಡೆ || ಎನ್ನ ಗೋಳು ತಾಗಿ ಎಂದಿಗೆ ಹೋದಾರು | ಪನ್ನಗಶಯನ ಶ್ರೀ ಪುರಂದರವಿಠಲ