ಕೀರ್ತನೆ - 415     
 
ಪಿಂಡಾಂಡದೊಳಗಿನ ಗಂಡನ ಕಾಣದೆ 1 ಮುಂಡೆಯರಾದರು ಪಂಡಿತರೆಲ್ಲ ಆಧಾರ ಮೊದಲಾದ ಆರು ಚಕ್ರಮೀರಿ | ನಾದಬಿಂದು ಕಳೆಯಳಿದ ಬಳಿಕ || ಶೋಧಿಸಿ ಸುಧೆಯ ಪ್ರಸಾದವನುಣ್ಣದೆ । ಓದುತ ಮನದೊಳು ಒಂದನು ತಿಳಿಯದೆ ನಾದದೊಳಗೆ ಸುನಾದ ಓಂಕಾರದಿ । ಪದವ ಬಿತ್ತಿ ಪರಿಣಾಮಿಯಾಗದೆ 1 ವೇದಾಂತರೂಪ ತದ್ರೂಪ ನಾಲಗೆಯಲಿ । ವಾದಿಸಿ ಮನದೊಳು ಒಂದನು ಅರಿಯದೆ ನವನಾಳ ಮಧ್ಯದಿ ಪವನ ಸುತ್ತಿದ್ದು ಪಣಿ | ಶಿವನ ತ್ರಿಪುಟ ಸ್ಥಿತಿ ಸ್ಥಿರವಾಗದೆ । ಭವರೋಗವೈದ್ಯನ ಧ್ಯಾನವ ಮಾಡದೆ 1 ಶವುರಿ ಶ್ರೀ ಪುರಂದರ ವಿಠಲನ ಸ್ಮರಿಸದೆ