ಪಾಪೋಸು ಹೋದುವಲ್ಲ - ಸ್ವಾಮಿ ಎನ್ನ -
ಪಾಪೋಸು ಹೋದುವಲ್ಲ
ಅಪಾರ ಜನುಮದಿ ಆರ್ಜನೆಯ ಮಾಡಿದ
ಉರಗಾದ್ರಿಯಲಿ ಸ್ವಾಮಿಪುಷ್ಕರಣಿ ಮೊದಲಾದ ।
ಪರಿ ಪರಿ ತೀರ್ಥ ಸ್ನಾನಗಳ ಮಾಡಿ ||
ಹರಿದಾಸರ ಕೂಡಿ ಶ್ರೀನಿವಾಸನ ಸಂ-
ದರುಶನದಲ್ಲಿ ಮೈಮರೆದಿದ್ದೆನೊ ಎನ್ನ
ಪರಮಭಾಗವತರು ಹರಿಕಥೆ ಪೇಳಲು 1
ಪರಮಭಕುತಿಯಲಿ ಕೇಳುತಿದ್ದೆ ||
ಪರಮಪಾಪಿಷ್ಠರ ಪಾಲಿಗೆ ಪೋದವು ।
ಪರಮಾತ್ಮನ ಮನಸಿಗೆ ಬಂತು ಹೀಗೆ
ಮಾಯೆ ಒಲಿದು ಎನಗೆ ತಂದು ಕೊಟ್ಟಿದ್ದಳು |
ದಾಯಾದಿಗಳು ನೋಡಿ ಸಹಿಸಲಿಲ್ಲ ॥
ಮಾಯಾರಮಣ ನೋಡಿ ಪುರಂದರವಿಠಲ
ಮಾಯೆಯಿಂದ ಮಟ್ಟಮಾಯವಾದವು ಈಗ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ