ಕೀರ್ತನೆ - 413     
 
ನಡುಮನೆಯೊಳಗೊಂದು ನಾಲ್ಕು ತೆಂಗಿನಮರ- ಹೇ- ಗಿಣಿ ಹೇ ಗಿಣಿಯೇ । ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯ್ತು- ಹೇಗಿಣಿ ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ- ಹೇ ಗಿಣಿ ತಲೆಯೆಲ್ಲದವ ಬಂದು ಹೊತ್ತುಕೊಂಡುಹೋದ - ಹೇ ಗಿಣಿ ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ -ಹೇ ಗಿಣಿ ಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ ಹೇ ಗಿಣಿ ಬಲೆಯ ಹಾಕಿದರು ಬಲೆಯ ದಾಟುವದಯ್ಯ- ಹೇ ಗಿಣಿ ಚೆಲುವ ಪುರಂದರವಿಠಲನೇ ಬಲ್ಲ ಹೇ- ಗಿಣಿ