ಕೀರ್ತನೆ - 411     
 
ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ । ತಾರೆ ಬಿಂದಿಗೆಯ ತರಲಾಗದಿದ್ದರೆ ಬಲಿಯಿಟ್ಟು ಬರುವೆನು । ತಾರೆ ಬಿಂದಿಗೆಯ ಅಚ್ಚುತನೆಂಬುವ ಕಟ್ಟೆಯ ನೀರಿಗೆ ತಾರೆಬಿಂದಿಗೆಯ ಅಲ್ಲಿ -। ಮತ್ಸರ ಕ್ರೋಧವೆಂಬ ಕೊಡವನು ತೊಳೆವೆನು ತಾರೆ ಬಿಂದಿಗೆಯ ರಾಮನಾಮವೆಂಬ ಸಾರದ ನೀರಿಗೆ ತಾರೆ ಬಿಂದಿಗೆಯ - ಹರಿ ನಾಮವೆಂಬುವ ಹರಿದು ಹೋಗುವ ನೀರಿಗೆ ತಾರೆ ಅಜ್ಞಾನವೆಂಬ ನೀರ ಚೆಲ್ಲಿಬಂದೆನು ತಾರೆ ಬಿಂದಿಗೆಯ ಸುಜ್ಞಾವೆಂಬುವ ನೀರಿಗೆ ಹೋಗುವೆ ತಾರೆ ಗೋವಿಂದನೆಂಬುವ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ ! ಚೆಲ್ವ ಬೆಳದಿಂಗಳೊಳು ಚಿಲುಮೆಯ ನೀರಿಗೆ ತಾರೆ ಬಿಂದು ಮಾಧವನ ಏರಿಯ ನೀರಿಗೆ ತಾರೆ ಬಿಂದಿಗೆಯ ಪು ರಂದರವಿಠಲನ ಅಭಿಷೇಕಕೆ ಬೇಕು ತಾರೆ